ST JOHN’S HIGH SCHOOL

ಶಾಲೆ ನಡೆದು ಬಂದ ದಾರಿ


“ಶತಮಾನಂ ಭವತಿ” ಎನ್ನುವ ಪ್ರಾಜ್ಞರ ಮಾತಿನಂತೆ ನೂರು ವರುಷಗಳ ಸಮೃದ್ಧ ಬಾಳ್ವೆಯನ್ನು ನಡೆಸುವುದೇ ಒಂದು ದಾಖಲೆ. ಈ ದಾಖಲೆಯನ್ನು ಹತ್ತು ಹಲವು ಸಾಧನೆಗಳೊಂದಿಗೆ ನಡೆಸಿಕೊಂಡು ಬಂದಿರುವ ಕೀರ್ತಿ ಮೂಡಬೆಟ್ಟು ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯದ್ದಾಗಿದೆ. ಸ್ವಾತಂತ್ರö್ಯ ಪೂರ್ವದಲ್ಲಿ ಅಂದರೆ ೧೯೦೨ರಲ್ಲಿ ಶ್ರೀ ಲಾದ್ರು ನೊರೊನ್ನರ ಸಂಚಾಕತ್ವದಲ್ಲಿ ಶ್ರೀ ರಂಗಮಾಸ್ಟರ್‌ರವರಿAದ ಕುರ್ಕಾಲು ಗ್ರಾಮದಲ್ಲಿ ಒಂದು ಸಣ್ಣ ಹುಲ್ಲಿನ ಮಾಡಿನಲ್ಲಿ ಈ ಶಾಲೆಯು ಸ್ಥಾಪನೆಯಾಯಿತು. ಬಳಿಕ ಶ್ರೀ ಲಾದ್ರು ನೊರೊನ್ನರು ಸಂಚಾಲಕತ್ವವನ್ನು ಮಟ್ಟು ಗ್ರಾಮದ ವಿಷ್ಣುಮೂರ್ತಿ ಭಟ್‌ರವರಿಗೆ ವರ್ಗಾಯಿಸಿದರು. ೧೯೧೨ರಲ್ಲಿ ಬಹಳ ಜೀರ್ಣ ಸ್ಥಿತಿಯಲ್ಲಿದ್ದ ಈ ಶಾಲೆಯ ಆಡಳಿತವನ್ನು ರೆ| ಫಾ| ಗ್ರೆಗೋರಿ ಡಿಸೋಜರು ವಹಿಸಿಕೊಂಡು ಇಗರ್ಜಿ ವಠಾರಕ್ಕೆ ವರ್ಗಾಯಿಸಿದರು. ಬಳಿಕ ೧೯೧೮ರಿಂದ ೧೯೨೪ರ ವರೆಗೆ ರೆ| ಫಾ| ಮಾತೆವ್ ಮಿನೇಜಸ್, ೧೯೨೫ ರಿಂದ ೧೯೩೪ರ ವರೆಗೆ ರೆ| ಫಾ| ಹಿಲಾರಿ ಗೊನ್ಸಾಲ್ವಿಸ್ ಶಾಲೆಯ ಚುಕ್ಕಾಣಿ ಹಿಡಿದು ಮುಂದುವರಿಸಿದರು. ಈ ಸಮಯದಲ್ಲಿ ಶ್ರೀ ರಾಮಯ್ಯ ಶೆಟ್ಟಿ, ಶ್ರೀ ಆನ್ಸ್ಲ್ಮ್ ಡಿಸೋಜ, ಶ್ರೀ ಎಮ್. ಶೀನ ಶೆಟ್ಟಿಯವರು ಮುಖ್ಯ ಶಿಕ್ಷಕರಾಗಿ ಶ್ರಮಿಸಿರುತ್ತಾರೆ. ೧೯೩೪ರಲ್ಲಿ ಸಂಚಾಲಕರಾಗಿ ಅಧಿಕಾರ ವಹಿಸಿದ ರೆ| ಫಾ| ಸಾಲ್ವದೊರ್ ಪೆರೀಸ್‌ರವರು ೧೯೫೨ರ ವರೆಗೆ ಶಾಲೆಯ ಅಭಿವೃದ್ಧಿಗಾಗಿ ದುಡಿದರು. ಇವರು ಕೇವಲ ಸಂಚಾಲಕರು ಆಗಿರದೆ ೧೯೪೦ ರಿಂದ ೧೯೪೯ರ ವರೆಗೆ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಇವರ ಕಾಲದಲ್ಲಿ ಸೈಂಟ್ ಜೋನ್ಸ್ ವಿದ್ಯಾದೇಗುಲವು ಆದೇಶ ಸಂಖ್ಯೆ ಡಿ.ಐ.ಯಸ್.೭೦/೪೪ ದಿನಾಂಕ ೨೩-೨-೧೯೪೪ರಂತೆ ೮ನೇ ತರಗತಿಯವರೆಗೆ ಖಾಯಂ ಮಂಜೂರಾತಿ ಪಡೆದು ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯಾಯಿತು. ೧೯೪೯ ರಿಂದ ೧೯೭೨ ರವರೆಗೆ ಸ್ಥಳೀಯರಾದ ದಿವಂಗತ ಶ್ರೀ ಮೌರಿಸ್ ಡೇಸರವರು ಮೂವತ್ತ ಮೂರು ವರ್ಷ ದೀರ್ಘಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ಈ ಕಾಲದಲ್ಲಿಯೇ ಅಂದರೆ ೧೯೫೩ರಲ್ಲಿ ೬ನೇ ಮತ್ತು ೭ನೇ ತರಗತಿಗಳಿಗೆ ವಿಭಾಗ ಮಾಡಲು ಅನುಮತಿ ದೊರೆತಿದೆ. ೧೯೭೨ ರಿಂದ ೧೯೯೨ನೇ ಫೆಬ್ರವರಿಯವರೆಗೆ ಶ್ರೀ ಐ. ಶ್ರೀನಿವಾಸ ಶ್ಯಾನುಭೋಗ್ ಕು| ಮೇರಿ ಸೆಲಿನ್ ಡೇಸಾ, ಶ್ರೀ ಸಿರಿಲ್ ಡಾಯಸ್ ಇವರು ಮುಖ್ಯೋಪಾಧ್ಯಾಯರಾಗಿ ಅತ್ಯುತ್ತಮ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿರುವರು. ಮುಂದಿನ ಹಲವು ವರ್ಷಗಳಲ್ಲಿ ಶಾಲೆಯು ಯತಾವತ್ತಾಗಿ ಮುಂದುವರಿಯುತ್ತಾ ಬಂದಿರುತ್ತದೆ. ೧೯೫೪ ರಿಂದ ೧೯೫೯ರವರೆಗೆ ರೆ| ಫಾ| ಆಂದ್ರು ಪಿಂಟೋ, ೧೯೫೯ ರಿಂದ ೧೯೭೦ ರವರೆಗೆ ರೆ| ಫಾ| ಗಾಬ್ರಿಯಲ್ ಕಸ್ತೆಲಿನೊ, ೧೯೭೦ ರಿಂದ ೧೯೭೭ರವರೆಗೆ ರೆ| ಫಾ| ವಿಕ್ಟರ್ ಸಾಲ್ಡನ್ಹ ಇವರು ಸಂಚಾಲಕತ್ವವನ್ನು ವಹಿಸಿದ್ದರು. ೧೯೭೭ರಲ್ಲಿ ಸೈಂಟ್ ಜೋನ್ಸ್ ಎವೆಂಜಲಿಸ್ಟ್ ಚರ್ಚಿನ ಪ್ರಧಾನ ಗುರುಗಳಾಗಿ ಬಂದ ರೆ| ಫಾ| ಗಾಬ್ರಿಯಲ್ ಡಿಸೋಜರವರು ೧೯೮೧ರಲ್ಲಿ ಇದೇ ಆವರಣದಲ್ಲಿ ಪ್ರೌಢಶಾಲೆಯನ್ನು ಆರಂಭಿಸಿದರು. ಇದರಿಂದಾಗಿ ಪ್ರಾಥಮಿಕ ಶಾಲಾ ಮೊದಲಿನ ತರಗತಿಗಳ ಕಟ್ಟಡವನ್ನು ಪ್ರೌಢಶಾಲೆಗೆ ಬಿಟ್ಟುಕೊಡಬೇಕಾಯಿತು. ೧೯೪೮ರಲ್ಲಿ ಪಾಂಗಾಳ ಲಿಟ್ಲ್ ಫ್ಲವರ್ ಹೆಣ್ಣು ಮಕ್ಕಳ ಶಾಲೆಯು ೫ ಮಂದಿ ಶಿಕ್ಷಕರೊಂದಿಗೆ ೧೯೮೫ ಜೂನ್‌ನಲ್ಲಿ ಸೈಂಟ್ ಜೋನ್ಸ್ ಹಿ. ಪ್ರಾ. ಶಾಲೆಯೊಂದಿಗೆ ವಿಲೀನಗೊಂಡು ಶಾಲೆಯಲ್ಲಿ ಒಟ್ಟು ೧೬ ಶಿಕ್ಷಕರು ಜ್ಞಾನ ಬೋಧನೆ ಮಾಡುತ್ತಿದ್ದರು. ಸುಮಾರು ೮೫೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ೧೯೮೮ ರಿಂದ ೧೯೯೫ರವರೆಗೆ ಸಂಚಾಲಕರಾಗಿದ್ದ ರೆ| ಫಾ| ಜೆ. ಪಿ. ತಾವ್ರೊರವರು ಜ್ಞಾನ ದೇಗುಲಕ್ಕೆ ಸುಸಜ್ಜಿತವಾದ ಕಟ್ಟಡ ಬೇಕೆಂದು ಮನಗಂಡು ೧೯೯೪ರಲ್ಲಿ ಊರ ಮತ್ತು ಪರವೂರವರ ಸಹಕಾರದಿಂದ ಈಗಿನ ಭವ್ಯವಾದ ಕಟ್ಟಡವನ್ನು ನಿರ್ಮಿಸಿದರು. ಆದರೆ ಇಂಗ್ಲೀಷ್ ವಿದ್ಯಾಭ್ಯಾಸದ ವ್ಯಾಮೋಹದಿಂದಾಗಿ ಕನ್ನಡ ಮಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲಾರಂಭಿಸಿದೆ. ಪ್ರಸ್ತುತ ನಮ್ಮ ಶಾಲೆಯಲ್ಲಿ ೪೭೭ ವಿದ್ಯಾರ್ಥಿಗಳಿದ್ದು ೧೧ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ೧೯೯-೨೦೦೦ ಮತ್ತು ೨೦೦೦-೨೦೦೧ನೇ ಸಾಲಿನಲ್ಲಿ ಕ್ರಮವಾಗಿ ೬೪ ಮತ್ತು ೭೨ ವಿದ್ಯಾರ್ಥಿಗಳು ೭ನೇ ತರಗತಿಯ ಜಿಲ್ಲಾಮಟ್ಟದ ಪರೀಕ್ಷೆಗೆ ಹಾಜರಾಗಿ ೧೦೦% ಫಲಿತಾಂಶ ಬಂದಿರುತ್ತದೆ. ನಮ್ಮ ಆವರಣದಲ್ಲಿ ಆಂಗ್ಲ ಮಾಧ್ಯಮ ಶಾಲೆಯು ಪ್ರಾರಂಭವಾದುದರಿAದ ಈ ಕಟ್ಟಡದ ಕೆಲವು ತರಗತಿಗಳನ್ನು ಆಂಗ್ಲ ಮಾಧ್ಯಮಕ್ಕೆ ಬಿಟ್ಟು ಕೊಡಲಾಗಿದೆ. ಆದುದರಿಂದ ಶತಮಾನೋತ್ಸವ ಆಚರಿಸುವ ಈ ಸುಸಂದರ್ಭದಲ್ಲಿ ಶಾಲೆಗೆ ಬೇಕಾದ ಸಭಾಭವನ ಮತ್ತು ತರಗತಿ ಕೋಣೆಗಳ ಅವಶ್ಯಕತೆ ಇದೆ. ಶಾಲೆಗೆ ಸಂಘ ಸಂಸ್ಥೆಗಳ ಕೊಡುಗೆಗಳು:- ೧೯೯೪ರಲ್ಲಿ ಈ ಭವ್ಯ ಕಟ್ಟಡದ ನಿರ್ಮಾಣದಲ್ಲಿ “ಮನೋನ್ ಯೂನಿದಾಸ” ಸ್ಲೆöÊನ್‌ನಲ್ಲಿರುವ ಸಂಸ್ಥೆ ೭.೩೨ ಲಕ್ಷ, “ಮಿಸರಿಯರ್” ಜರ್ಮನಿ ಸಂಸ್ಥೆಯು ೪.೫ ಲಕ್ಷ, ‘ಔPಂಒ’ ಸಂಸ್ಥೆ ಇಟಲಿ ೦.೭೪ ಲಕ್ಷ ಅಲ್ಲದೆ ಹಳೆ ವಿದ್ಯಾರ್ಥಿ ಸಂಘ ೫೦ ಸಾವಿರ ರೂ.ಗಳ ಕೊಡುಗೆಯನ್ನು ನೀಡಿರುತ್ತಾರೆ. ಹಲವು ವಿದ್ಯಾಭಿಮಾನಿಗಳು ೩-೪ ವರ್ಷಗಳ ಹಿಂದೆ ನಿಖರ ಠೇವಣಿ ಇಟ್ಟು ಅದರ ಬಡ್ಡಿಯಿಂದ ಅನೇಕ ಆಚರಣೆಗಳು ನಡೆಸಲು ಅನುವು ಮಾಡಿಕೊಟ್ಟಿರುತ್ತಾರೆ. ಅವರುಗಳು ವಾರ್ಷಿಕೋತ್ಸವಕ್ಕೆ ೧. ಆಲ್ಫೆಡ್ ವಿಲ್ಫೆçಡ್ ಫಂಡ್ - ೫,೦೦೦.೦೦ ೨. ಶ್ರೀ ಪೆಡ್ರಿಕ್ ಕ್ವಾಡ್ರಸ್ - ೧೦,೦೦೦.೦೦ ೩. ಶ್ರೀ ಹೆನ್ರಿ ಕಸ್ತಲಿನೊ - ೧೦,೦೦೦.೦೦ ೪. ಹಳೆವಿದ್ಯಾರ್ಥಿ ಸಂಘ - ೩,೦೦೦.೦೦ ೫. ಶ್ರೀ ಹೆನ್ರಿ ಮಾರ್ಟಿಸ್ - ೧೦,೦೦೦.೦೦ ೬. ಶ್ರೀ ಮೈಕಲ್ ಮೋಲಿ ಕಸ್ತಲಿನೊ - ೧೦,೦೦೦.೦೦ ೭. ಶ್ರೀ ಎಡ್ವರ್ಡ್ ಮೆಂಡೋನ್ಸಾ - ೫,೦೦೦.೦೦ ೮. ಕು. ಸ್ಕೊಲೆಸ್ಟಿನ್ ಬರ್ಬೋಜ - ೧೦,೦೦೦.೦೦ ಸ್ವಾತಂತ್ರö್ಯ ದಿನಾಚರಣೆ:- ೧. ನಿವೃತ್ತ ಶಿಕ್ಷಕ ಶ್ರೀ ಪಾಸ್ಕಲ್ ಡಿಸೋಜ - ೩,೦೦೦.೦೦ ೨. ಶ್ರೀ ವಿಕ್ಟರ್ ವಾಜ್ - ೨,೦೦೦.೦೦ ೩. ವರ್ಗವಾದ ಶಿಕ್ಷಕಿ ಶ್ರೀಮತಿ ಐರಿನ್ - ೫,೦೦೦.೦೦ ೪. ಗೌರವ ಶಿಕ್ಷಕಿಯಾಗಿದ್ದ ಶ್ರೀಮತಿ ಕ್ರಿಸ್ತಿನ್ ದೊರತಿ ಕಸ್ತೆಲಿನೋ - ೫,೦೦೦.೦೦ ೫. ಶ್ರೀ ಮಾರ್ಕ್ ವಾಜ್ - ೨,೦೦೦.೦೦ ಮಕ್ಕಳ ದಿನಾಚರಣೆ:- ೧. ನಿವೃತ್ತ ಶಿಕ್ಷಕಿ ಕು. ತೆರೆಜ ಕ್ಷಾಡ್ರಸ್ - ೫,೦೦೦.೦೦ ೨. ನಿವೃತ್ತ ಶಿಕ್ಷಕಿ ಶ್ರೀಮತಿ ಆಗ್ನೆಸ್ ಲೋಬೊ - ೫,೦೦೦.೦೦ ೩. ಸೇವೆಯಲ್ಲಿರುವ ಶಿಕ್ಷಕ ಶ್ರೀ ರಾಜಗೋಪಾಲ ಆಚಾರ್ಯ - ೫,೦೦೦.೦೦ ೪. ದಿವಂಗತ ಬ್ಯಾಪ್ಟಿಸ್ಟ್ ಜೆರಾಲ್ಡ್ ಮಾರ್ಟಿಸ್ ಮೆಮೋರಿಯಲ್ ಫ್ರೆöÊಜ್ ಫಂಡ್ - ೫,೦೦೦.೦೦ ಶಿಕ್ಷಕರ ದಿನಾಚರಣೆ:- ನಿವೃತ್ತ ಶಿಕ್ಷಕಿ ಕು. ಎವ್ಲಿನ್ ಮಾರ್ಟಿಸ್ - ೧೦,೦೦೦.೦೦ ಹೀಗೆ ಒಟ್ಟು ಜುಮ್ಲಾ ರೂ. - ೧,೧೦,೦೦೦.೦೦ ಈ ಹಣದ ಬಡ್ಡಿಯಿಂದ ಸ್ವಾತಂತ್ರö್ಯ ದಿನಾಚರಣೆ, ಶಿಕ್ಷಕರ ದಿನಾಚರಣೆ, ಗಾಂಧಿ ಜಯಂತಿ, ಮಕ್ಕಳ ದಿನಾಚರನೆ, ದೀಪಾವಳಿ, ಕ್ರಿಸ್‌ಮಸ್, ವಾರ್ಷಿಕೋತ್ಸವ ಬಹುಮಾನಗಳು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಅಂತೆಯೇ ನಮ್ಮ ಶಾಲಾ ನಿವೃತ್ತ ಶಿಕ್ಷಕರು ದಿವಂಗತ ಶ್ರೀ ಜೆ. ಎಂ. ರೊಡ್ರಿಗಸ್ ಮತ್ತು ಸ್ಕೊಲೇಸ್ಟಿಕಾ ಪಿರೇರಾ ಇವರ ನೆನಪಿಗಾಗಿ ಅವರ ಮಕ್ಕಳು ಪ್ರತೀ ವರ್ಷ ಶಿಕ್ಷಕ ದಿನಾಚರಣೆಯಂದು ಮೂರು ಶಾಲಾ ಶಿಕ್ಷಕರಿಗೆ ಮತ್ತು ಆಡಳಿತ ಮಂಡಳಿಯವರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿರುತ್ತಾರೆ. ಮೇಲಿನವರ ನೆನಪಿಗಾಗಿ ಇಟ್ಟ ನಿರಖು ಠೇವಣಿಯ ಬಡ್ಡಿಯಿಂದ ಅಧಿಕ ಅಂಕಗಳಿಸಿದ ಏಳನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಏರ್ಪಾಡೂ ಇದೆ. ಈ ಶಾಲೆಯಲ್ಲಿ ಪಾಠ ಪ್ರವಚನಗಳು, ಪಠ್ಯೇತರ ಚಟುವಟಿಕೆಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದ ಹಾಗೂ ಸಹಕರಿಸುತ್ತಾ ಇರುವ ಹೆತ್ತವರನ್ನು, ಊರ ಸಮಸ್ತರನ್ನು ಧನ್ಯತಾ ಭಾವದಿಂದ ಸ್ಮರಿಸುತ್ತೇವೆ. ನಮಗೆ ಮಾರ್ಗದರ್ಶನ ನೀಡಿ ನಮ್ಮ ವಿದ್ಯಾಸಂಸ್ಥೆಯು ಉಜ್ವಲ ಪರಂಪರೆಯನ್ನು ಹೊಂದಲು ಅಹಿರ್ನಿಶಿ ದುಡಿದ ಎಲ್ಲಾ ಪೂಜ್ಯ ಸಂಚಾಲಕರಿಗೆ ಗೌರವದಿಂದ ತಲೆಬಾಗುತ್ತೇನೆ. ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನದಿಂದ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯಲಿ ಎಂದು ಹಾರೈಸುತ್ತೇನೆ.

- ಶ್ರೀ ರುಜಾರಿಯೋ ಡಿಸೋಜ
ಮುಖ್ಯೋಪಾಧ್ಯಾಯರು